ಸಕ್ಕರೆ ಹೆಚ್ಚಾದಾಗ ದೇಹ ನೀಡುವ ಎಚ್ಚರಿಕೆ ಲಕ್ಷಣಗಳು-ಗಮನಿಸಲೇಬೇಕಾದ ಸೂಚನೆಗಳು

Yadagiri Junction Team

Published on: 02 November, 2025

Whatsapp Group

Join Now

Telegram Group

Join Now

ಇತ್ತೀಚಿನ ದಿನಗಳಲ್ಲಿ, ಫಾಸ್ಟ್‌ಫುಡ್, ಪ್ಯಾಕೇಜ್ಡ್ ಪದಾರ್ಥಗಳು ಮತ್ತು ಸಿಹಿತಿಂಡಿಗಳ ಸೇವನೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಸಕ್ಕರೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ವೈದ್ಯಕೀಯ ತಜ್ಞರ ಪ್ರಕಾರ, ಭಾರತೀಯರ ದಿನನಿತ್ಯದ ಆಹಾರದಲ್ಲಿ ಲುಕಾಯಿತ ಸಕ್ಕರೆಯ ಪ್ರಮಾಣ (Hidden Sugar) ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಕೇವಲ ಚಹಾ-ಕಾಫಿಯಲ್ಲಿ ಹಾಕುವ ಸಕ್ಕರೆಯಷ್ಟೇ ಅಲ್ಲ, ನಾವು ತಿನ್ನುವ ಜ್ಯೂಸ್, ಬಿಸ್ಕತ್, ಬ್ರೆಡ್, ಸಾಸ್, ರೆಡಿ-ಟು-ಈಟ್ ಪದಾರ್ಥಗಳಲ್ಲಿ ಇರುವ ಸಕ್ಕರೆ ನಮ್ಮ ದೇಹಕ್ಕೆ ನೇರವಾಗಿ ಹಾನಿ ಮಾಡುತ್ತದೆ.

ಹೆಚ್ಚುವರಿ ಸಕ್ಕರೆಯ ಸೇವನೆ ಯಕೃತ್‌ (Liver) ಮೇಲಿನ ಒತ್ತಡವನ್ನೇ ಹೆಚ್ಚು ಮಾಡದೇ, ಕೊಲೆಸ್ಟ್ರಾಲ್‌, ರಕ್ತದೊತ್ತಡ, ತೂಕ ಹೆಚ್ಚಳ, ಹಾರ್ಮೋನ್ ಅಸಮತೋಲನ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳ ಮೂಲವಾಗುತ್ತದೆ. ಮುಖ್ಯವಾಗಿ, ಸಕ್ಕರೆ ಅತಿಯಾಗಿ ಸೇವಿಸುವವರು ತಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಸಣ್ಣ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ, ಮುಂದೆ ಮಧುಮೇಹದ ಅಪಾಯದತ್ತ ತಳ್ಳಿಕೊಳ್ಳುತ್ತಾರೆ. ಹಾಗಾದರೆ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತಿರುವುದನ್ನು ಹೇಗೆ ಗುರುತಿಸಬಹುದು? ಯಾವ ಲಕ್ಷಣಗಳು ಎಚ್ಚರಿಕೆಯ ಗಂಟೆ ಹೊಡೆಯುತ್ತವೆ? ಮತ್ತು ಸಿಹಿ ಅಂಶವನ್ನು ಸಂಪೂರ್ಣವಾಗಿ ತ್ಯಜಿಸಬೇಕೇ…? ಎಂಬ ಬಗ್ಗೆ ನೋಡೋಣ ಬನ್ನಿ.

ಹಸಿವು ಕಡಿಮೆಯಾಗುವುದು:

ಸಕ್ಕರೆಯ ಅತಿಯಾದ ಸೇವನೆ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಏರಿಸುತ್ತದೆ. ಇದರ ಪರಿಣಾಮ,

  • ಮುಖದಲ್ಲಿ ಮೊಡವೆಗಳು ಮೂಡುವುದು
  • ಹಸಿವು ಕಡಿಮೆಯಾಗುವುದು
  • ಜೀರ್ಣಕ್ರಿಯೆ ಅಸ್ತವ್ಯಸ್ತವಾಗುವುದು

ದೆಹದಲ್ಲಿ ಕ್ಯಾಲೊರಿಗಳು ಒಂದೇ ತಟ್ಟಿನಲ್ಲಿ ಜಮೆಯಾಗುವುದರಿಂದ ಹೊಟ್ಟೆಗೆ ಸರಿಯಾದ ಹಸಿವೆ ಕಾಣದು. ದಿನದಿಂದ ದಿನಕ್ಕೆ ಹಸಿವು ಕಡಿಮೆಯಾಗುತ್ತಿದ್ದರೆ, ಇದು ನೀವು ಸಿಹಿತಿಂಡಿಗಳನ್ನು ಮಿತಿಗಿಂತ ಹೆಚ್ಚು ಸೇವಿಸುತ್ತಿದ್ದೀರಿ ಎಂಬ ಸೂಚನೆ. ಅದೇ ರೀತಿ ಯಾವುದೇ ಕಾರಣವಿಲ್ಲದೆ ತೂಕ ಏರಿಕೆ ಕಂಡುಬಂದರೂ ಅದು ಹೆಚ್ಚುವರಿ ಸಕ್ಕರೆಯ ಪರಿಣಾಮವಾಗಿರಬಹುದು

ಮೆಗ್ನೀಸಿಯಮ್ ಮಟ್ಟ ಕುಸಿತ: 

ಬಿಳಿ ಸಕ್ಕರೆ ದೇಹದಲ್ಲಿ ಸೈಟೊಕಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಕಿರಿಕಿರಿ, ಖಿನ್ನತೆ, ಆಯಾಸಕ್ಕೆ ಕಾರಣವಾಗುತ್ತದೆ.

ಅತಿಯಾದ ಸಕ್ಕರೆ ಸೇವನೆ, ಮೆಗ್ನೀಸಿಯಮ್ ಅನ್ನು ಕಡಿಮೆ ಮಾಡುತ್ತದೆ. ದೇಹದ ನಿದ್ರಾ ಚಕ್ರವನ್ನು ಅಸ್ತವ್ಯಸ್ತಗೊಳಿಸುತ್ತದೆ. ನಿದ್ರೆ ಕೆಡುತ್ತಿದೆ, ಮಧ್ಯರಾತ್ರಿ ಎಚ್ಚರವಾಗುತ್ತಿದೆ, ದೇಹ ಸದಾ ಬಲಹೀನವಾಗುತ್ತಿದೆ ಎಂದರೆ ಸಕ್ಕರೆಯ ಸೇವನೆ ಹೆಚ್ಚಾಗಿದೆ ಎನ್ನಬಹುದು.

ಚರ್ಮ ಸಮಸ್ಯೆಗಳು:

  • ಅತಿಯಾದ ಸಕ್ಕರೆ ಸೇವನೆಯು,
  • ಮುಖದಲ್ಲಿ ಮೊಡವೆ (Acne)
  • ಚರ್ಮದಲ್ಲಿ ಒಣತನ
  • ತುರಿಕೆ
  • ಹಾರ್ಮೋನಲ್ ಚೇಂಜಸ್

ಇವುಗಳನ್ನು ಉಂಟುಮಾಡಬಹುದು. ಈ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ, ತಕ್ಷಣ ಸಿಹಿಯನ್ನೂ ಪ್ಯಾಕೇಜ್ಡ್ ಜಂಕ್ ಫುಡ್‌ನನ್ನೂ ಕಡಿಮೆ ಮಾಡುವುದು ಒಳಿತು.

ಸಿಹಿ ಅಂಶವನ್ನು ಸಂಪೂರ್ಣ ತ್ಯಜಿಸಬೇಕೇ?

ಇಲ್ಲ! ದೇಹಕ್ಕೆ ಸ್ವಲ್ಪ ಸಿಹಿಯ ಅಗತ್ಯವಿದೆ. ಆದರೆ ಬಿಳಿ ಸಕ್ಕರೆಯ ಬದಲು ನೈಸರ್ಗಿಕ ಸಕ್ಕರೆಯನ್ನು ಆಯ್ಕೆ ಮಾಡಬೇಕು ಉದಾಹರಣೆಗೆ,

  • ಹಣ್ಣುಗಳು (Natural Fructose)
  • ಹಾಲು, ಮೊಸರು (Lactose)
  • ಜೇನು (Honey – ಮಿತ ಪ್ರಮಾಣದಲ್ಲಿ)
  • ಬೆಲ್ಲ (Jaggery – ಮಿತ ಪ್ರಮಾಣದಲ್ಲಿ)

ಇವು ದೇಹಕ್ಕೆ ಅಗತ್ಯ ಇರುವ ನೈಸರ್ಗಿಕ ಸಕ್ಕರೆಯನ್ನು ನೀಡುತ್ತವೆ, ಹಾನಿ ಮಾಡೋದಿಲ್ಲ.

ಗಮನಿಸಿ: 

  • ದಿನಕ್ಕೆ 25 ಗ್ರಾಂಕ್ಕಿಂತ ಹೆಚ್ಚು ಬಿಳಿ ಸಕ್ಕರೆ ಸೇವನೆ ಬೇಡ.
  • ಪ್ಯಾಕೇಜಡ್ ಫುಡ್ ಲೇಬಲ್ಸ್ ಓದಿ.
  • ನೀರು ಹೆಚ್ಚು ಕುಡಿಯಿರಿ.
  • ವ್ಯಾಯಾಮಕ್ಕೆ ಆದ್ಯತೆ ನೀಡಿ.